Saturday, December 11, 2010

ಮನದಾಳದ ಮಾತುಗಳು

ನಮಸ್ಕಾರ
             ನನ್ನ ಹೆಸರು  ವಿಷ್ಣು . ನಾನು ಒಬ್ಬ ಓಂಕಾರ್ ಯುವಕ ಮಂಡಲದ ಸದಸ್ಯ. ನಮ್ಮ ಈ ತಂಡ ಸ್ಥಾಪನೆಗೊಂಡು ಒಂದುವರೆ ವರ್ಷ  ಆಯಿತು. ಈ  ಒಂದುವರೆ ವರ್ಷದಲ್ಲಿ ತುಂಬಾ ಒಳ್ಳೆಯದು ಮತ್ತು ಕೆಟ್ಟದ್ದು  ನಡೆದಿದೆ. ಇದನ್ನು ನಿಮ್ಮ ಮುಂದೆ ಬಿಚ್ಚಿಡಲು ನಾನು ಬಯಸಿದ್ದೇನೆ.
ಮೊದಲನೆಯದಾಗಿ   ಕೆಟ್ಟದು ನಡೆದದ್ದರಿಂದ ಓಂಕಾರ್ ತಂಡ  ಒಳ್ಳೆಯ  ತಂಡವಾಗಿ  ಮಾರ್ಪಡಲು  ಕಾರಣವಾಯಿತು . ನಮ್ಮ ಹೊಸ ತಂಡ ಉದ್ಭವ ಆಗುವ ಮೊದಲು, ಅಂದರೆ  ಡಿಸೆಂಬರ್  2009 ಕೊನೆಯ ವಾರದಲ್ಲಿ ಹೊಸ ವರ್ಷದ ಆಚರಣೆ ಬಗ್ಗೆ ಚರ್ಚೆ ನಡೆಯಲಾರಂಭವಾಯಿತು. ಆಗ ನಮ್ಮ ತಂಡದಲ್ಲಿದ್ದ ಇಬ್ಬರು ಸದಸ್ಯರು nonveg ಬೇಡ veg items ಮಾಡಬೇಕು ಅಂತ ಪಟ್ಟು ಹಿಡಿದರು. ಇದಕ್ಕೆ ಉಳಿದ ಸದಸ್ಯರ ಸಮ್ಮತಿ ಇರಲಿಲ್ಲ. ಆಗ ಇವರಿರ್ವರು ನಮ್ಮದು ಬೇರೆನೇ ತಂಡ ಮಾಡ್ತೇವೆ ಅಂತ ಹೋಗಿಬಿಟ್ಟರು. ಸರಿ... ಎಂದು ನಾವು ಸುಮ್ಮಗೆ ಕುಳಿತು ಬಿಟ್ಟೆವು. ಹೊಸವರ್ಷ  ಆಚರಣೆಯಲ್ಲಿಯೂ ಎರಡು ಪಂಗಡವಾಯಿತು. ಅದರ ನಂತರ ನಾವು ಸಂಧಾನ ಮಾಡೋಣ ನಮ್ಮ ಊರೊಳಗೆ ಇಂಥ ಜಗಳ ಎಲ್ಲ ಬೇಡ ಅಂತ ಅವರಲ್ಲಿ ಕೇಳಿಕೊಂಡೆವು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ, ನಮ್ಮದು ಬೇರೆನೇ... ತಂಡ ಅಂದುಕೊಂಡು ಕಾಲ್ಕಿತ್ತರು. ನಾವು ಸರಿ ಎಂದು ನಮ್ಮ  ಉಳಿದ ಸದಸ್ಯರೊಡನೆ volleyball  ಆಡಲು ಶುರು ಮಾಡಿದೇವೆ. ಆಶ್ಚರ್ಯವೆಂದರೆ ದಿನ ಕಳೆದಂತೆ ನಮ್ಮ ತಂಡದಲ್ಲಿ ಹೊಸ ಹೊಸ ಸದಸ್ಯರ ಆಗಮನವಾಯಿತು. ಮತ್ತೊಂದು ಆಶ್ಚರ್ಯವೆಂದರೆ ಜಗಳ ಮಾಡಿ ಹೋದ ಆ ಇಬ್ಬರು ತಂಡದ ಸದಸ್ಯರು ಕೂಡ ನಮ್ಮ ತಂಡಕ್ಕೆ ವಾಲಿದರು. ಈಗ ಅವರ ತಂಡದಲ್ಲಿ ಜಗಳ ಮಾಡಿದ ಇಬ್ಬರೇ ಸದಸ್ಯರು ಇದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ  ಅನ್ನೋ ಹಾಗೆ ಅವರ ತಂಡದ ಪರಿಸ್ಥಿತಿ ಬಂದೊದಗಿತು. ಈಚೆ cricket ಆದಕ್ಕಾಗದೆ  ಆಚೆ volleyball  ಅದಕ್ಕಾಗದೆ ಈಗ ಮನೆಯಲ್ಲಿಯೇ... ಕೂತು ಚನ್ನಮನೆ  ಆಡುವ ಪರಿಸ್ಥಿತಿ ಬಂದಿದೆ. ಅದರ ನಂತರ ಈಗ ನಮ್ಮ ತಂಡ ಈಗ  19 ಸದಸ್ಯರಿರುವ ಬಲಿಷ್ಠ ತಂಡವಾಗಿ ಮಾರ್ಪಟ್ಟಿದೆ. ಪ್ರತೀ ಶನಿವಾರ ಮತ್ತು ಆದಿತ್ಯವಾರ volleyball  ಆಡುತ್ತಿದ್ದೇವೆ. ಸರಕಾರೀ ರಜೆ ಇದ್ದಾಗಲೂ ನಮ್ಮ ಈ ತಂಡ ಮೈದಾನದಲ್ಲಿ ಹಾಜರ್ ಇದ್ದೇ ಇರುತ್ತದೆ . ಸಮಯ ಸಿಕ್ಕಿದಾಗಲೆಲ್ಲ ನಾವು ಒಂದು ಕಡೆ ಒಟ್ಟಾಗಿ ಹರಟೆ ಹೊಡಿಯುತ್ತಿರುತ್ತ್ಹೇವೆ. ಈ ಹರಟೆಯಲ್ಲಿ ಮುಖ್ಯ ಕೆಲವು ವಿಷಯದ ಬಗ್ಗೆ ಚರ್ಚೆ ನಡೆಯುತ್ತದೆ ಮತ್ತು ಈ ಚರ್ಚೆಯ  ಮಧ್ಯ ನಗುವಿನ ಪಟಾಕಿಯನ್ನೂ ಹಾರಿಸುತ್ತಾರೆ. ಇದರಿಂದ ಸಮಯ ಕಳೆದದ್ದೇ ಗೊತ್ತಾಗುದಿಲ್ಲ. ಈ ವರ್ಷ ನಾವು ಹಲವು ಕಡೆ ಪ್ರವಾಸ ಇಟ್ಟುಕೊಂಡಿದ್ದೆವು. ನಾಲ್ಕು ತಿಂಗಳ ಹಿಂದೆ ಧರ್ಮಸ್ಥಳ , ಸುಭ್ರಹ್ಮಣ್ಯ, ಕೊಡ್ಯಡ್ಕ ಪ್ರವಾಸ ಕ್ಯಗೊಂಡಿದ್ದೆವು. ಮತ್ತೊಮ್ಮೆ  ಅತ್ತೂರು, ಬಂಟಕಲ್ಲು ಜಾತ್ರೆಗೆ ಮತ್ತು ಇತರ ಸಣ್ಣಪುಟ್ಟ ಪ್ರವಾಸ ಹೋಗಿ ಬಂದೆವು.
           ಈಗ ನಾವು ಒಂದು ಹೊಸ ಒಳ್ಳೆಯ ಜನಸೇವೆಯ ಮಾಡಲು ಮುಂದಾಗಿದ್ದೇವೆ. ಅದೇನೆಂದರೆ ನಮ್ಮ ಭೈರಂಜೆ ಶಾಲಾ ವಟಾರದಲ್ಲಿ  ಪ್ರಾಣಯೋಗ ಶಿಬಿರ ಮಾಡಲಿದ್ದೇವೆ. ಜನವರಿ ೩ ರಿಂದ 9 ರವರೆಗೆ ನಡೆಯಲಿದೆ. ಮೊದಲನೆಯ ಬಾರಿ ಇಂಥ ದೊಡ್ಡ ಕೆಲಸಕ್ಕೆ  ಹಸ್ಥ ಜೋಡಿಸಿದ್ದೇವೆ. ಈ  ಜನಸೇವೆ ಯಶಸ್ವಿಯಾಗಿ ನಡೆಯಲೆಂದು ನನ್ನ ಆಶಯ. ಇದೇ  ಥರ  ನಮ್ಮ ತಂಡದ ವತಿಯಿಂದ ಇನ್ನೂ  ತರಹ ತರಹದ ಒಳ್ಳೆಯ ಕೆಲಸ ಮಾಡಿಸಲು ದೇವರು ಶಕ್ತಿ ಕೊಡಲೆಂದು ಪ್ರಾರ್ಥಿಸುತ್ತೇನೆ. ನಮ್ಮದು ಜನಮನ್ನಣೆಯ ತಂಡವಾಗಿ ರೂಪುಗೊಳ್ಳಬೇಕು ಅನ್ನೋದೇ ನನ್ನ ಆಸೆ ಮತ್ತು ಗುರಿ.  ನನ್ನ ಮನಸಿನಲ್ಲಿ ಬಚ್ಚಿಟ್ಟಿದ್ದ ಎಲ್ಲ ಮಾತುಗಳನ್ನು  ನಿಮ್ಮ ಮುಂದೆ ಇಟ್ಟಿರುತ್ತೇನೆ.
                                                                                                                        ಇತೀ ನಿಮ್ಮವ
                                                                                                                                   ವಿಷ್ಣು

2 comments:

  1. ನಿನ್ನ್ನ ಕನಸೇ ನಮ್ಮೆಲ್ಲರ ಕನಸು ಕೂಡ .....!!!!

    ReplyDelete
  2. Good article with good thoughts, gr8 work Vishnu :)

    ReplyDelete

Note: Only a member of this blog may post a comment.