ದಶಕಗಳಿಂದ ನಡೆದು ಬರುತ್ತಿಹ ಗ್ರಾಮದ ಕೋಲ, ಇ ಸಲ ೧೯,೨೦, ೨೧ ಕ್ಕೆ ಕಾಜರಗುತ್ತಿನಲ್ಲಿ ನಡೆಯಿತು. ಓಂಕಾರ್ ಯುಥ್ ಕ್ಲಬ್ ನ ಸದಸ್ಯರು ಅಲ್ಲಿ ಗೆ ಭೇಟಿ ನೀಡಿ , ಗ್ರಾಮ ದೇವರ ಆಶೀರ್ವಾದ ಪಡೆದರು. ನೆರೆಹೊರೆಯ ಎಲ್ಲ ಗ್ರಾಮಸ್ಥರು ಅಲ್ಲಿ ನೆರೆಯುತ್ತಾರೆ. ತುಂಬಾ ಹಳೆ ಕಾಲದಿಂದ ನಡೆದು ಬರುತ್ತ್ತಿಹ ಇ ಕೊಲಕ್ಕೆ ಜನರು ತುಂಬಾ ಆದ್ಯತೆ ನೀಡುತ್ತಾರೆ. ಎಲ್ಲರೂ ತಪ್ಪದೆ ಬಂದು ದೇವರ ಆಶಿರ್ವಾದಕ್ಕೆ ಭಾಜನರಾಗುತ್ತಾರೆ. ಜನರು ತಮ್ಮ ಕಷ್ಟವನ್ನು, ಸಂಕಟವನ್ನು ದೇವರಲ್ಲಿ ಹೇಳಿ ಸೂಕ್ತ ಸಮಾಧಾನವನ್ನು ಪಡೆಯುತ್ತಾರೆ.
ಮೂರು ದಿನ ಇ ಕೋಲ ಸಮಾರಾಧನೆ ನಡೆಯುತ್ತದೆ. ಮೊದಲ ದಿನ ಜುಮಾದಿಯ ಕೋಲ. ಎರಡನೆ ದಿನ ಬೊಬ್ಬರ್ಯ ಮತ್ತೆ ಮೂರನೇ ದಿನ ಮುಗ್ಗೆರ ಕೋಲ ನಡೆಯುತ್ತದೆ.
ದೈವ ಗಳ ಸ್ಥಾನ ತುಂಬಾ ಹಳೆದಗಿದ್ದು, ಅದನ್ನು ಜೀರ್ನೋದ್ಧರ ಮಾಡುವ ಸಲುವಾಗಿ ಆರುಡ ಪ್ರೆಶ್ನೆ ಹಾಕಿ ನೋಡಲಾಗಿತ್ತು.ಆಗ ಹಲವು ನಿಘುಡ ಸತ್ಯಗಳು ಬಯಲಾದವು.ಭೈರಂಜೆಯಲ್ಲಿ ಪುರಾತನ ಕಾಲದ ಶಿವನ ದೇವಸ್ತಾನ ಇದೆ(ಇ ದೇವಸ್ಥಾನದ ಫೋಟೋ ಹಾಗು ಅದರ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿನ ಪೋಸ್ಟಲ್ಲಿ ಕೊಡಲಾಗುವುದು).ಇ ದೇವಸ್ತಾನ ತುಂಬಾ ಕಾರ್ನಿಕ ದೇವಸ್ತಾನ ಹಾಗು ಗ್ರಾಮ ದೇವರ ಪೂಜೆಯ ಮೊದಲು ಆ ದೇವಾಲಯದಲ್ಲಿ ಪೂಜೆ ನಡೆಯಬೇಕು.ಈ ದೇವಸ್ಥಾನದ ಜೀರ್ನೋಧ್ಹಾರ ಕೂಡ ಆಗಬೇಕಾಗಿದೆ ಎಂದು ಹಲವು ವಿಷಯಗಳು ಗೊತ್ತಾದವು. ಆದರೆ ಅದೆಲ್ಲ ಇ ಸಲ ಪರಿಹಾರ ಮಾಡಲು ಸಾದ್ಯವಾಗಲಿಲ್ಲ ಹಾಗು ಅದಕ್ಕೆ ತುಂಬಾ ಖರ್ಚಾಗುತ್ತದೆ.
ಈ ಸಲ ಕೋಲದ ಮೊದಲು ಹಲವು ಯಾಗಗಳು ನಡೆದವು ಹಾಗು ಮಧ್ಯಾನ್ನ ಬಂದವರೆಲ್ಲರಿಗೂ ಊಟದ ವ್ಯವಸ್ತೆ ಕೂಡ ಮಾಡಲಾಗಿತ್ತು. ಸುಮಾರು ಒಂದು ಸಾವಿರ ಜನ ಬಂದಿದ್ದರು.
![]() |
| ಜುಮಾದಿ ದೈವದ ಸ್ಥಾನ |
![]() |
| ಜುಮಾದಿ ದೈವ |
![]() |
| ಯುಥ್ ಕ್ಲಬ್ನ ಕೆಲವು ಸದಸ್ಯರು |
![]() |
| ಮುಗ್ಗೆರ ದೈವದ ಸ್ಥಾನ |
ಕಡೆ ದಿನ ಕೋಲ ತುಂಬಾ ವಿಜ್ರಂಬನೆಯಿಂದ ನಡೆಯುತ್ತದೆ. ತುಂಬಾ ಜನರು ನೆರೆಯುತ್ತಾರೆ. ಮಕ್ಕಳು ಆಟಿಕೆಗಳನ್ನು ಖರೀದಿಸಲು ಬರುತ್ತಾರೆ. ಕೋಲ ಬೆಳಿಗ್ಗೆಯ ವರೆಗೆ ನಡೆಯುತ್ತದೆ. ಒಂದು ಸಣ್ಣ ವೀಡಿಯೊ attach ಮಾಡಿದ್ದೇನೆ. ನೋಡಿ ಆನಂದಿಸಿ.





Doing some nice work at hometown..have fun Jeevan..:)
ReplyDeleteThanks nitin...:)Will try to put more interesting posts..keep visiting the blog.
ReplyDelete