Monday, January 31, 2011

ಅಂಗನವಾಡಿ ಕೇಂದ್ರ

ಭೈರಂಜೆ ಶಾಲೆಯ ಹತ್ತಿರ ಭೈರಂಜೆಯ ಅಂಗನವಾಡಿ ಕೇಂದ್ರ ಇದೆ. ಇದರ ಕೆಲವು ಫೋಟೋ ನಿಮ್ಮ ಮುಂದೆ ಇಡುತಿದ್ದೇನೆ. 







Children enjoying the delicious food

Prema teacher, the Cook and the Care-taker 

Senior students of Anganavaadi

Wednesday, January 19, 2011

kananjaar


ಕಣಂಜಾರುವಿನಲ್ಲಾದ ಅದ್ಭುತ ಅನುಭವ 
ನಮ್ಮ ತಂಡವು  ಕಳೆದ ತಿಂಗಳು ರಾತ್ರಿ 10pm ಗೆ ಕಣಂಜಾರು ದ್ಯೆವಸ್ಥಾನಕ್ಕೆ  ಹೋಗಿತ್ತು.  ಅಲ್ಲಿ ನಮಗಾದ ಅನುಭವ ಹಿಂದೆಂದೂ ಆಗಿರಲಿಲ್ಲ. ಆ  ದೈವಸ್ಥಾನ ದಲ್ಲಿ ಹರಕೆ ಹೇಳಿ ಫಲ ಕಂಡ ಭಕ್ತಾದಿಗಳು ಕೋಳಿಗಳನ್ನು ಬಲಿ  ಕೊಡುದರ ಮೂಲಕ  ತಮ್ಮ ಹರಕೆ ಸಂದಾಯ ಮಾಡುತ್ತಾರೆ. ಅಲ್ಲಿ ಸುಮಾರು 3500 ರಿಂದ 4000 ಕೋಳಿಗಳನ್ನು ಬಲಿ ಕೊಡಲಾಗಿತ್ತು.  ಅದನ್ನು  ನೋಡಿ ನಮಗೆ ಆಶ್ಚರಚಕಿತರಾದೆವು. ಅದನ್ನು ಬಲಿ ಕೊಡುವ ಪರಿ ನೋಡಿ ದಿಘ್ಭ್ರಾಂತರಾದೆವು. ಕೋಳಿಗಳ ಬಲಿಯನ್ನು ಆಚಾರಿಗಳು ಸ್ವತಃ ತಮ್ಮ  ಊಳಿಯಲ್ಲಿ  ಮಾಡುತ್ತಿದ್ದರು. ನಂತರ ಕಡಿದ  ಕೋಳಿಗಳನ್ನು  ಅಡುಗೆಗಾಗಿ ಸರಿ ಮಾಡುವ ಪರಿ ಅದ್ಭುತವಾಗಿತ್ತು. ಅದರಲ್ಲಿ ಊರಿನವರೇ ಒಗ್ಗಟ್ಟಾಗಿ ಸೇರಿ ಕೋಳಿಗಳನ್ನು ಸರಿ ಮಾಡುತ್ತಿದ್ದರು. ಮೊದಲು ಅದನ್ನು ಬೆಂಕಿಯಲ್ಲಿ ಹಿಡಿದು ಅದರಲ್ಲಿ ಸಿಕ್ಕಿ ಹಾಕಿಕೊಂಡಿರುವ ರೆಕ್ಕೆ ಗರಿಗಳನ್ನು ಸ್ವಚ್ಛ ಮಾಡುತ್ತಿದ್ದರು. ಆ ಊರಿನವರು ಒಗ್ಗಟ್ಟಾಗಿ ಸೇರಿ ಕೆಲಸ ಮಾಡುತಿದ್ದರಿಂದ ನಮಗೂ ಅವರೊಟ್ಟಿಗೆ ಕೆಲಸ ಮಾಡಲು ಕಾಲುಗಳೇ  ನಿಲ್ಲಲಿಲ್ಲ. ನಾವೂ ಆ ಕೆಲಸಕ್ಕೆ ಕ್ಯೆ ಹಾಕಿದೆವು. ಇದು ನಮ್ಮ ಜೀವನದಲ್ಲಾದ ಅದ್ಭುತ ಅನುಭವ. ಇದರ ಕೆಲವು ಫೋಟೋಗಳನ್ನು ಹಾಕಿರುತ್ತೇನೆ ನೋಡಿ ಆನಂದಿಸಿ. ಕೋಳಿ ಸಾರು ಎರಡು ದೂಡ್ಡ ಚರಗಿಯಲ್ಲಿ ಮಾಡುತ್ತಿದ್ದರು. ಅದನ್ನು ಮಾಡುವ ಪರಿ ಸೊಗಸಾಗಿತ್ತು. ಸಾರು ಮಾಡಲು ತುಂಬಾ ಸಮಯ ಬೇಕಾಗಿರುದರಿಂದ ಬಂದ ಭಕ್ತಾದಿಗಳಿಗೆ ಸಮಯ ಕಳೆಯಲು ಕಬ್ಬಡಿ ಪಂದ್ಯಾಟ ಇಟ್ಟಿದ್ದರು. ಇದಂತೂ ತುಂಬಾ ಮಜವಾಗಿತ್ತು.ಸುಮಾರು 3000 ಭಕ್ತಾದಿಗಳು ಆಗಮಿಸಿದ್ದರು. ನಾವು ಊಟ ಸ್ವೀಕರಿಸುವಾಗ ಸುಮಾರು 2am ಆಗಿತ್ತು.
ಇದು ನಮ್ಮ ಜೀವನದಲ್ಲಿ ಆದ ಅದ್ಭುತ ಅನುಭವ ಇದನ್ನು ಮರೆಯಲು ಸಾಧ್ಯವೇ ಇಲ್ಲ. ನಿಮಗೆ ಇದನ್ನು ನೋಡುವ ಆಸೆ ಇದ್ದಲಿ ಈ ವರ್ಷದ ಕೊನೆಯ ತಿಂಗಳ ನಿಗದಿತ ದಿನದಲ್ಲಿ ಬನ್ನಿ. 


                                                            ಕಣಂಜಾರು  ದೇವಸ್ಥಾನ 


ಕೋಳಿಗಳನ್ನು ಸರಿ ಮಾಡಲು ನೆರದ ಜನರು 






ನಾವೂ ಈ ಕೆಲಸಕ್ಕೆ ಕ್ಯೆ ಹಾಕಿದ್ದೆವು. ನಮ್ಮ ತಂಡದವರಾದ ಗಣೇಶ್, ವಿಷ್ಣು, ಜೀವನ, ಪ್ರೇಮಾನಂದ, ಆನಂದ್, ಉಮೇಶ್ ನಾಯಕ್, ಉಮೇಶ್ ಕಾಮತ್, ದೇವೇಂದ್ರ, ಪರಮೇಶ್, ನಿತಿನ್, ರಮಾನಂದ, ನವೀನ ಮತ್ತು ಸಂದೀಪ್ ಬಂದಿದ್ದರು. 

Monday, January 17, 2011

tournament

ವಾಲಿಬಾಲ್ ಟೂರ್ನಮೆಂಟ್
ನಮ್ಮ ತಂಡವು ಕಳೆದ ಡಿಸೆಂಬರ್ನಲ್ಲಿ ರಾಜಾಪುರ ಸಾರಸ್ವತ ಸಂಘ ಪರ್ಕಳ ಆಯೋಜಿಸಿರುವ ವಾಲಿಬಾಲ್ ಪಂದ್ಯಾಟ ಹೋಗಿದ್ದೆವು. ಅದರಲ್ಲಿ ನಮ್ಮ ತಂಡದವರಾದ  ಜೀವನ, ಪುನೀತ್, ರಮಾನಂದ, ನಿತೀಶ್, ಗಣೇಶ್, ಆದರ್ಶ್ ಭಾಗವಹಿಸಿದ್ದರು. ನಮ್ಮ ತಂಡ ಸೆಮಿಫೈನಲ್ ಹಂತದಿಂದ ಹೊರ ಬಂದಿತು. ಅದೇ ಥರ ಡಿಸೆಂಬರ್ 25 ರಂದು ಕಬ್ಯಾಡಿ ಫ್ರೆಂಡ್ಸ್ ಕಬ್ಯಾಡಿ  ಆಯೋಗಿಸಿದ್ದ ಕ್ರಿಕೇಟ್ ಟೂರ್ನಮೆಂಟ್ನಲ್ಲಿ ಆಡಿತ್ತು. ಅದರಲ್ಲಿ ನಮ್ಮ ತಂದದವರಾದ  ವಿಷ್ಣು, ಆನಂದ, ಪುನೀತ್, ನಿತಿನ್, ರಾಮದಾಸ್, ಪ್ರವೀಣ್, ಗಣೇಶ್ ಮತ್ತು, ಜೀವನ  ಭಾಗವಹಿಸಿದ್ದರು.  ಅದರಲ್ಲೂ ಸೆಮಿಫೈನಲ್ ಹಂತ ತಲುಪಿ ಫೈನಲ್ ಹೋಗಲು ಕೆಲವೇ ಹೆಜ್ಜೆ ಇರುವಾಗ ಹೊರಬಂದಿತು. ಇದರ ಕೆಲವು ಫೋಟೋಗಳನ್ನು ನಿಮ್ಮ ಮುಂದೆ ಇಟ್ಟಿರುತ್ತೇವೆ.         






















Monday, January 10, 2011

ಉಚಿತ ಪ್ರಾಣಯೋಗ ಶಿಬಿರ


ಓಂಕಾರ್ ಯುವಕ ಮಂಡಲ , ಭೈರಂಜೆ 
 ಹಾಗೂ
 ಪತಂಜಲಿ ಯೋಗ ಪೀಟ , ಹರಿದ್ವಾರ ಪತಂಜಲಿ ಯೋಗ ಸಮಿತಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್, ಉಡುಪಿ ಜಿಲ್ಲೆ 
  ಇವರುಗಳ ಸಹಭಾಗಿತ್ವದಲ್ಲಿ ಬಾಬ ರಾಮದೇವಜಿ ಮಹಾರಾಜ ಇವರಿಂದ ತರಬೇತಿಗೊಂಡ ನುರಿತ ಶಿಕ್ಷಕರಿಂದ 
      ಉಚಿತ ಪ್ರಾಣಯೋಗ ಶಿಬಿರ   
           ದಿನಾಂಕ: 03 -01 -2011 ರಿಂದ 09 -01 -2011  ಸಮಯ ಸಂಜೆ ಗಂಟೆ 6 -00 ರಿಂದ 7 .30 ರ ವರೆಗೆ ಭೈರಂಜೆಯ ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಿತು.  ಸುಮಾರು 65 ರಿಂದ 70 ಜನರು ಯೋಗಾಭ್ಯಾಸ ಮಾಡಲು ಬಂದಿದ್ದರು.  ಯೋಗ ಗುರುಗಳಾದ ಶ್ರೀ ಶ್ರೀನಿವಾಸ ಶೆಣೈ  ಹಾಗು ಶ್ರೀ ಉಮಾನಂದ ಶೆಣೈ ಇವರುಗಳು ಪ್ರಾಣಯೋಗವನ್ನು ತುಂಬಾ ಉತ್ಸಾಹದಿಂದ ಕಲಿಸಿಕೊಟ್ಟರು. 
            ಓಂಕಾರ್ ಯುಥ್  ಕ್ಲಬ್ ನ ಎಲ್ಲಾ ಸದಸ್ಯರು  ಒಗ್ಗಟ್ಟಿನಿಂದ ಹಾಗೂ ತುಂಬಾ ಉತ್ಸಾಹದಿಂದ ಈ ಕೆಲಸಕ್ಕೆ ಕ್ಯೆ    ಮಿಲಾಯಿಸಿದ್ದರಿಂದ  ಪ್ರಾಣಯೋಗ ಶಿಬಿರ ಯಶಸ್ವಿಯಾಗಿ ನಡೆಸಲು ಸಹಕಾರಿಯಾಯಿತು. ನಮ್ಮ ತಂಡದ ಎಲ್ಲಾ ಸದಸ್ಯರು ಶಿಬಿರ ಪ್ರಾರಂಭ ಆಗುವ ಮುನ್ನ ಪ್ರತೀ ಆದಿತ್ಯವಾರ ಹಾಗೂ ಇನ್ನಿತರ ದಿನಗಳಲ್ಲಿ ಒಟ್ಟಾಗಿ ಸೇರಿ ಶಿಬಿರದ ಪೂರ್ವ ತಯಾರಿ ಮಾಡಿದ್ದರು. 
               ಎಪ್ರಿಲ್ ತಿಂಗಳಲ್ಲಿ ಬಾಬ ರಾಮದೇವಜಿಯವರು ಉಡುಪಿಯಾ ಎಂ.ಜಿ.ಎಂ ಮೈದಾನದಲ್ಲಿ  ಆಗಮಿಸುತ್ತಿರುದರಿಂದ ಅದಕ್ಕೆ  ಸುಮಾರು 10000 ಜನ ಬರುವ ಸಾಧ್ಯತೆ ಇದೆ. ಅದಕ್ಕೆ ಖರ್ಚು ವೆಚ್ಚಗಳು ತುಂಬಾ  ಆಗುತ್ತದೆ. ಆದ್ದರಿಂದ ನಮ್ಮ ತಂಡದ ವತಿಯಿಂದ ರೂಪಾಯಿ 2270 ದಾನ ನೀಡುವ ಮುಲಕ ಸಹಕರಿಸಿದೆವು. 

                          
                            ನಮ್ಮ ಯೋಗ ಶಿಬಿರದ ಕೆಲವು ಫೋಟೋಗಳನ್ನು ನಿಮ್ಮ ಮುಂದೆ ಇಟ್ಟಿರುತ್ತೇನೆ.

                                          


                                                                ಯೋಗ ಗುರುಗಳಾದ ಶ್ರೀ ಶ್ರೀನಿವಾಸ  ಶೆಣೈ
 
                                                                        ಪ್ರಾಣಯೋಗ ಕಲಿಯಲು ಬಂದ ಊರವರು