Monday, January 10, 2011

ಉಚಿತ ಪ್ರಾಣಯೋಗ ಶಿಬಿರ


ಓಂಕಾರ್ ಯುವಕ ಮಂಡಲ , ಭೈರಂಜೆ 
 ಹಾಗೂ
 ಪತಂಜಲಿ ಯೋಗ ಪೀಟ , ಹರಿದ್ವಾರ ಪತಂಜಲಿ ಯೋಗ ಸಮಿತಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್, ಉಡುಪಿ ಜಿಲ್ಲೆ 
  ಇವರುಗಳ ಸಹಭಾಗಿತ್ವದಲ್ಲಿ ಬಾಬ ರಾಮದೇವಜಿ ಮಹಾರಾಜ ಇವರಿಂದ ತರಬೇತಿಗೊಂಡ ನುರಿತ ಶಿಕ್ಷಕರಿಂದ 
      ಉಚಿತ ಪ್ರಾಣಯೋಗ ಶಿಬಿರ   
           ದಿನಾಂಕ: 03 -01 -2011 ರಿಂದ 09 -01 -2011  ಸಮಯ ಸಂಜೆ ಗಂಟೆ 6 -00 ರಿಂದ 7 .30 ರ ವರೆಗೆ ಭೈರಂಜೆಯ ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಿತು.  ಸುಮಾರು 65 ರಿಂದ 70 ಜನರು ಯೋಗಾಭ್ಯಾಸ ಮಾಡಲು ಬಂದಿದ್ದರು.  ಯೋಗ ಗುರುಗಳಾದ ಶ್ರೀ ಶ್ರೀನಿವಾಸ ಶೆಣೈ  ಹಾಗು ಶ್ರೀ ಉಮಾನಂದ ಶೆಣೈ ಇವರುಗಳು ಪ್ರಾಣಯೋಗವನ್ನು ತುಂಬಾ ಉತ್ಸಾಹದಿಂದ ಕಲಿಸಿಕೊಟ್ಟರು. 
            ಓಂಕಾರ್ ಯುಥ್  ಕ್ಲಬ್ ನ ಎಲ್ಲಾ ಸದಸ್ಯರು  ಒಗ್ಗಟ್ಟಿನಿಂದ ಹಾಗೂ ತುಂಬಾ ಉತ್ಸಾಹದಿಂದ ಈ ಕೆಲಸಕ್ಕೆ ಕ್ಯೆ    ಮಿಲಾಯಿಸಿದ್ದರಿಂದ  ಪ್ರಾಣಯೋಗ ಶಿಬಿರ ಯಶಸ್ವಿಯಾಗಿ ನಡೆಸಲು ಸಹಕಾರಿಯಾಯಿತು. ನಮ್ಮ ತಂಡದ ಎಲ್ಲಾ ಸದಸ್ಯರು ಶಿಬಿರ ಪ್ರಾರಂಭ ಆಗುವ ಮುನ್ನ ಪ್ರತೀ ಆದಿತ್ಯವಾರ ಹಾಗೂ ಇನ್ನಿತರ ದಿನಗಳಲ್ಲಿ ಒಟ್ಟಾಗಿ ಸೇರಿ ಶಿಬಿರದ ಪೂರ್ವ ತಯಾರಿ ಮಾಡಿದ್ದರು. 
               ಎಪ್ರಿಲ್ ತಿಂಗಳಲ್ಲಿ ಬಾಬ ರಾಮದೇವಜಿಯವರು ಉಡುಪಿಯಾ ಎಂ.ಜಿ.ಎಂ ಮೈದಾನದಲ್ಲಿ  ಆಗಮಿಸುತ್ತಿರುದರಿಂದ ಅದಕ್ಕೆ  ಸುಮಾರು 10000 ಜನ ಬರುವ ಸಾಧ್ಯತೆ ಇದೆ. ಅದಕ್ಕೆ ಖರ್ಚು ವೆಚ್ಚಗಳು ತುಂಬಾ  ಆಗುತ್ತದೆ. ಆದ್ದರಿಂದ ನಮ್ಮ ತಂಡದ ವತಿಯಿಂದ ರೂಪಾಯಿ 2270 ದಾನ ನೀಡುವ ಮುಲಕ ಸಹಕರಿಸಿದೆವು. 

                          
                            ನಮ್ಮ ಯೋಗ ಶಿಬಿರದ ಕೆಲವು ಫೋಟೋಗಳನ್ನು ನಿಮ್ಮ ಮುಂದೆ ಇಟ್ಟಿರುತ್ತೇನೆ.

                                          


                                                                ಯೋಗ ಗುರುಗಳಾದ ಶ್ರೀ ಶ್ರೀನಿವಾಸ  ಶೆಣೈ
 
                                                                        ಪ್ರಾಣಯೋಗ ಕಲಿಯಲು ಬಂದ ಊರವರು



























1 comment:

Note: Only a member of this blog may post a comment.