ಕಣಂಜಾರುವಿನಲ್ಲಾದ ಅದ್ಭುತ ಅನುಭವ
ನಮ್ಮ ತಂಡವು ಕಳೆದ ತಿಂಗಳು ರಾತ್ರಿ 10pm ಗೆ ಕಣಂಜಾರು ದ್ಯೆವಸ್ಥಾನಕ್ಕೆ ಹೋಗಿತ್ತು. ಅಲ್ಲಿ ನಮಗಾದ ಅನುಭವ ಹಿಂದೆಂದೂ ಆಗಿರಲಿಲ್ಲ. ಆ ದೈವಸ್ಥಾನ ದಲ್ಲಿ ಹರಕೆ ಹೇಳಿ ಫಲ ಕಂಡ ಭಕ್ತಾದಿಗಳು ಕೋಳಿಗಳನ್ನು ಬಲಿ ಕೊಡುದರ ಮೂಲಕ ತಮ್ಮ ಹರಕೆ ಸಂದಾಯ ಮಾಡುತ್ತಾರೆ. ಅಲ್ಲಿ ಸುಮಾರು 3500 ರಿಂದ 4000 ಕೋಳಿಗಳನ್ನು ಬಲಿ ಕೊಡಲಾಗಿತ್ತು. ಅದನ್ನು ನೋಡಿ ನಮಗೆ ಆಶ್ಚರಚಕಿತರಾದೆವು. ಅದನ್ನು ಬಲಿ ಕೊಡುವ ಪರಿ ನೋಡಿ ದಿಘ್ಭ್ರಾಂತರಾದೆವು. ಕೋಳಿಗಳ ಬಲಿಯನ್ನು ಆಚಾರಿಗಳು ಸ್ವತಃ ತಮ್ಮ ಊಳಿಯಲ್ಲಿ ಮಾಡುತ್ತಿದ್ದರು. ನಂತರ ಕಡಿದ ಕೋಳಿಗಳನ್ನು ಅಡುಗೆಗಾಗಿ ಸರಿ ಮಾಡುವ ಪರಿ ಅದ್ಭುತವಾಗಿತ್ತು. ಅದರಲ್ಲಿ ಊರಿನವರೇ ಒಗ್ಗಟ್ಟಾಗಿ ಸೇರಿ ಕೋಳಿಗಳನ್ನು ಸರಿ ಮಾಡುತ್ತಿದ್ದರು. ಮೊದಲು ಅದನ್ನು ಬೆಂಕಿಯಲ್ಲಿ ಹಿಡಿದು ಅದರಲ್ಲಿ ಸಿಕ್ಕಿ ಹಾಕಿಕೊಂಡಿರುವ ರೆಕ್ಕೆ ಗರಿಗಳನ್ನು ಸ್ವಚ್ಛ ಮಾಡುತ್ತಿದ್ದರು. ಆ ಊರಿನವರು ಒಗ್ಗಟ್ಟಾಗಿ ಸೇರಿ ಕೆಲಸ ಮಾಡುತಿದ್ದರಿಂದ ನಮಗೂ ಅವರೊಟ್ಟಿಗೆ ಕೆಲಸ ಮಾಡಲು ಕಾಲುಗಳೇ ನಿಲ್ಲಲಿಲ್ಲ. ನಾವೂ ಆ ಕೆಲಸಕ್ಕೆ ಕ್ಯೆ ಹಾಕಿದೆವು. ಇದು ನಮ್ಮ ಜೀವನದಲ್ಲಾದ ಅದ್ಭುತ ಅನುಭವ. ಇದರ ಕೆಲವು ಫೋಟೋಗಳನ್ನು ಹಾಕಿರುತ್ತೇನೆ ನೋಡಿ ಆನಂದಿಸಿ. ಕೋಳಿ ಸಾರು ಎರಡು ದೂಡ್ಡ ಚರಗಿಯಲ್ಲಿ ಮಾಡುತ್ತಿದ್ದರು. ಅದನ್ನು ಮಾಡುವ ಪರಿ ಸೊಗಸಾಗಿತ್ತು. ಸಾರು ಮಾಡಲು ತುಂಬಾ ಸಮಯ ಬೇಕಾಗಿರುದರಿಂದ ಬಂದ ಭಕ್ತಾದಿಗಳಿಗೆ ಸಮಯ ಕಳೆಯಲು ಕಬ್ಬಡಿ ಪಂದ್ಯಾಟ ಇಟ್ಟಿದ್ದರು. ಇದಂತೂ ತುಂಬಾ ಮಜವಾಗಿತ್ತು.ಸುಮಾರು 3000 ಭಕ್ತಾದಿಗಳು ಆಗಮಿಸಿದ್ದರು. ನಾವು ಊಟ ಸ್ವೀಕರಿಸುವಾಗ ಸುಮಾರು 2am ಆಗಿತ್ತು.
ಇದು ನಮ್ಮ ಜೀವನದಲ್ಲಿ ಆದ ಅದ್ಭುತ ಅನುಭವ ಇದನ್ನು ಮರೆಯಲು ಸಾಧ್ಯವೇ ಇಲ್ಲ. ನಿಮಗೆ ಇದನ್ನು ನೋಡುವ ಆಸೆ ಇದ್ದಲಿ ಈ ವರ್ಷದ ಕೊನೆಯ ತಿಂಗಳ ನಿಗದಿತ ದಿನದಲ್ಲಿ ಬನ್ನಿ.

ಕಣಂಜಾರು ದೇವಸ್ಥಾನ
ಕೋಳಿಗಳನ್ನು ಸರಿ ಮಾಡಲು ನೆರದ ಜನರು
ನಾವೂ ಈ ಕೆಲಸಕ್ಕೆ ಕ್ಯೆ ಹಾಕಿದ್ದೆವು. ನಮ್ಮ ತಂಡದವರಾದ ಗಣೇಶ್, ವಿಷ್ಣು, ಜೀವನ, ಪ್ರೇಮಾನಂದ, ಆನಂದ್, ಉಮೇಶ್ ನಾಯಕ್, ಉಮೇಶ್ ಕಾಮತ್, ದೇವೇಂದ್ರ, ಪರಮೇಶ್, ನಿತಿನ್, ರಮಾನಂದ, ನವೀನ ಮತ್ತು ಸಂದೀಪ್ ಬಂದಿದ್ದರು.










No comments:
Post a Comment
Note: Only a member of this blog may post a comment.