Tuesday, March 1, 2011

ಬಾ ಅಣ್ಣ ಗೊಕರ್ಣಾ...

ಇದೇ ಬರುವ ಆದಿತ್ಯವಾರ  ಅಂದರೆ 6 /03 /2011 ರಂದು ಓಂಕಾರ್ ಯುಥ್ ಕ್ಲಬ್ , ಪವಿತ್ರ ಯಾತ್ರ ಸ್ತಳವಾದ ಗೊಕರ್ಣಾ ಕ್ಕೆ ಪ್ರವಾಸ ಹೋಗಲಿದೆ. ಪ್ರವಾಸಕ್ಕೆ  ಇನ್ನು ಕೇವಲ 4 ದಿನಗಳಿರುವುದರಿಂದ, ಪ್ರವಾಸದ ಸಿದ್ದತೆ ಭರದಿಂದ ಸಾಗುತ್ತಿದೆ. ಪ್ರವಾಸದ ತಯಾರಿ ಇ ರೀತಿ ಇದೆ.

 ಪ್ರವಾಸಕ್ಕೆ ಹೋಗಲು ಪಂಜದ್ಕ  ದಾಮುನ ಮಗ  ರವಿ ಯಾ ಮಿನಿ ಬಸ್ಸನ್ನು ಬುಕ್ ಮಾಡಲಾಗಿದೆ.  ಆದಿತ್ಯವಾರ ಮುಂಜಾನೆ 5.30 ಕ್ಕೆ ಸರಿಯಾಗಿ ಭೈರಂಜೆಯಿಂದ ನಾವು ಹೊರಡಲಿದ್ದೇವೆ.ಮಣಿಪಾಲದಿಂದ ಗೋಕರ್ಣ ಸುಮಾರು 200 ಕಿ ಮಿ ಇದೆ. ಹಾಗಾಗಿ ಕಣಿಸ್ಟ 4 ರಿಂದ 4 .30 ಗಂಟೆ ಪ್ರಯಾಣ ಇದೆ. ಹಾಗಾಗಿ ನಾವು ಗೋಕರ್ಣ ತಲುಪುವಾಗ ಸುಮಾರು 10 ರಿಂದ 10 .30 ತನಕ ಆಗಬಹುದು. ನಂತರ ಅಲ್ಲಿ ದೇವಸ್ತಾನ ಹಾಗು ಪ್ರಸಿದ್ದ ಬೀಚ್ ಗಳಾದ ಓಂ ಬೀಚ್, ಕೂಡ್ಲೇ ಬೀಚ್ ,ಗೋಕರ್ಣ ಬೀಚ್,  ಹಾಫ್  ಮೂನ್  ಬೀಚ್   ಹಾಗು Paradise  ಬೀಚ್ ಗಳನ್ನೂ ತಿರುಗಲಿದ್ದೇವೆ. 

ಅದಾದನಂತರ  ಬಹು ನಿರೀಕ್ಷಿತ Beach Volleyball  ಆಡುವ ಪ್ಲಾನ್ ಇದೆ. ಅದಕ್ಕೋಸ್ಕರ ನಾವು  volleyball , Net ಎಲ್ಲವನ್ನು  ನಾವು ಕೊಂಡೊಯ್ಯ ಲಿದ್ದೇವೆ. 

ಸುಮಾರು 20 ಜನ ಹೋಗುವ ಮಾತಾಗಿದೆ. ನಮ್ಮ ಹೊಟ್ಟೆಯ ಹಸಿವನ್ನು ನೀಗಲು 15 kg ಕೋಳಿ ಹಾಗು 400  ಇಡ್ಲಿ ಸಾಕಗಬಹುದೆಂಬೆ ಅಂದಾಜು ಮಾಡಲಾಗಿದೆ. ಕೋಳಿ ಯನ್ನು ಹಿಂದಿನ ದಿನ ಅಂದರೆ ಶನಿವಾರ ರಾತ್ರಿ ತಯಾರು ಮಾಡಲಾಗುತ್ತೆ. ಕೋಳಿಯನ್ನು ನಮ್ಮ ಕೋಳಿ expert   Mr . ಪ್ರೇಮಾನಂದ ಮಾಡಲಿದ್ದಾರೆ.  ಇಡ್ಲಿ ಬೆಳಗ್ಗೆ ಹೋಟೆಲಿನಿಂದ ಕೊಳ್ಳುವುದು.   ಬಾಯಾರಿಕೆಗೆ 20 ಲಿಟರಿನ 4  Water Can ಹಿಡಿದುಕೊಂಡು ಹೋಗುತಿದ್ದೇವೆ.  ಎಲ್ಲರಿಗೆ ತಮಗೆ ಬೇಕಾದ ಬಟ್ಟೆ ಬರೆಗಳನ್ನು ತರಲು ನಿರ್ದೇಶಿಸಲಾಗಿದೆ. ಪ್ರವಾಸದ ವೆಚ್ಚ  ಸುಮಾರು 9 ರಿಂದ 10 ಸಾವಿರದೊರೆಗೆ ಆಗಬಹುದೆಂದು ಅಂದಾಜಿಸಲಾಗಿದೆ. 

ಪ್ರವಾಸದ  ಅನುಭವ ಹಾಗು ಫೋಟೋ, ವೀಡಿಯೊ ಗಳನ್ನೂ ಮುಂದಿನ ಪೋಸ್ಟ್ ಗಳಲ್ಲಿ ಹಾಕಲಿದ್ದೇವೆ. 

 


6 comments:

  1. Enjoy madi ellaru. Try to cover YANA aslo..

    ReplyDelete
  2. Yaana swalpa doora aagabahudu....!!!!

    ReplyDelete
  3. nachige vishaya, koli and temple no combination

    ReplyDelete
  4. no temple only beach we went...!!!

    ReplyDelete
  5. Hello All,

    Can we take small small steps in helping Jan Lokpal Bill law to be success; which is commissioned few days back!!

    Can somone from our team take an initiative to explain what is this all about!! or can arrange a small sabha to explain about this to all the village members (or near by) and ask them to take initial steps on this!!

    For more details follow this:-
    http://indiaagainstcorruption.org/

    ReplyDelete
  6. Thanks for the suggestion. We appreciate it..!!! We will see in what way we can work in that direction.

    ReplyDelete

Note: Only a member of this blog may post a comment.